ಅಭಿಪ್ರಾಯ / ಸಲಹೆಗಳು

ಉತ್ಪಾದನೆ ತರಬೇತಿ ಕೇಂದ್ರಗಳು

  • ಎ. ನಾರು ಉತ್ಪಾದನಾ ಕೇಂದ್ರಗಳು :
   ರಾಜ್ಯದಲ್ಲಿ ಸುಮಾರು ೧೭೪ ನಾರಿನ ಉತ್ಪಾದನಾ ಘಟಕಗಳು ಇದ್ದು, ವಾರ್ಷಿಕ ೫೫,೯೫೦ ಟನ್ ಸ್ಥಾಪಿತ ಸಾಮರ್ಥ್ಯವಿರುತ್ತದೆ. ಈ ಪೈಕಿ ೧೨೭ ನಾರು ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಇವುಗಳ ವಾರ್ಷಿಕ ಸ್ಥಾಪಿತ ಸಾಮರ್ಥ್ಯ ೪೨,೦೦೦ ಮೆ.ಟನ್‌ಗಳಿದ್ದು, ೨೩,೫೨೩ ಮೆ.ಟನ್ ಮಾತ್ರ ಉತ್ಪಾದಿಸುತ್ತಿದೆ.
  • ಬಹುತೇಕ ನಾರಿನ ಘಟಕಗಳು ಗ್ರಾಮೀಣ ಪ್ರದೇಶದಲ್ಲಿರುವುದರಿಂದ ಹಾಗೂ ಗ್ರಾಮಾಂತರ ಫೀಡರ್‌ನಿಂದ ವಿದ್ಯುತ್ ಸರಬರಾಜು ಮತ್ತು ಆಗ್ಗಾಗ್ಗೆ ವಿದ್ಯುತ್ ವ್ಯತ್ಯಯದಿಂದಾಗಿ ಉತ್ಪಾದನೆ ಸಾಮರ್ಥ್ಯ ತಕ್ಕಂತೆ ಉತ್ಪಾದನೆಯಾಗುತ್ತಿಲ್ಲ.
  • ನುಸಿ ರೋಗದಿಂದಾಗಿ ತೆಂಗಿನ ಸಿಪ್ಪೆಗಳ ಗಾತ್ರದಲ್ಲಿ ಕಡಿಮೆಯಾಗಿ, ನಾರಿನ ಪ್ರಮಾಣವು ಸಹ ಕಡಿಮೆಯಾಗಿರುತ್ತದೆ. ರಾಜ್ಯದಲ್ಲಿನ ನಾರಿನ ಕೈಗಾರಿಕೆಯು ಗರಿಷ್ಟ ಉದ್ಯೋಗಾವಕಾಶವನ್ನು ಗ್ರಾಮೀಣ ಪ್ರದೇಶದಲ್ಲಿ ಸೃಷ್ಟಿಸಿದ್ದು, ಇದರಿಂದ ಸಮಾಜದಲ್ಲಿ ಅರ್ಥಿಕವಾಗಿ ದುರ್ಬಲರಾಗಿರುವ ಜನರಿಗೆ ಉದ್ಯೋಗಾವಕಾಶಕ್ಕೆ ಅನುವು ಮಾಡಿಕೊಟ್ಟು, ಬೇರೆ ನಗರಗಳಿಗ ವಲಸೆ ಹೋಗುವುದನ್ನು ತಡೆಗಟ್ಟಿದೆ.
  • ಬಿ. ತೆಂಗಿನ ನಾರಿನ ಹುರಿ :
  • ರಾಜ್ಯದಲ್ಲಿ ಸುಮಾರು ೧೬೪ ಹುರಿ ತಯಾರಿಕಾ ಘಟಕಗಳಿದ್ದು, ಇವುಗಳ ಉತ್ಪಾದನಾ ಸಾಮರ್ಥ್ಯ ೪,೩೯೭ ಮೆ.ಟನ್. ಈ ಹುರಿಗಳನ್ನು ಬಹುತೇಕ ಸಾಂಪ್ರದಾಯಿಕ ರಾಟೆಗಳಿಂದ ಉತ್ಪಾದಿಸಲ್ಪಡುತ್ತಿದೆ.
  • ಸಿ. ಹಗ್ಗ ತಯಾರಿಕಾ ಘಟಕ:
  • ರಾಜ್ಯದಲ್ಲಿ ೨೭ ಹಗ್ಗ ತಯಾರಿಕಾ ಘಟಕಗಳು ಇದ್ದು, ಸುಮಾರು ೮೫೦ ಮೆ.ಟನ್. ಹಗ್ಗಗಳನ್ನು ಸ್ಥಳೀಯ ಮಾರುಕಟ್ಟೆ ಬೇಡಿಕೆಗನುಗುಣವಾಗಿ ಉತ್ಪಾದಿಸುತ್ತಿದೆ.
  • ಡಿ. ಮ್ಯಾಟ್ ಮತ್ತು ಮ್ಯಾಟಿಂಗ್ :
  • ರಾಜ್ಯದಲ್ಲಿ ಒಟ್ಟು ೯೭ ಮ್ಯಾಟ್ ಮತ್ತು ಮ್ಯಾಟಿಂಗ್ ಉತ್ಪಾದನಾ ಘಟಕಗಳು ಸ್ಥಾಪಿತಗೊಂಡಿದ್ದು, ವಾರ್ಷಿಕ ೧೩,೦೫೫ ಮೆ.ಟನ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಆದರೆ, ಈ ಘಟಕಗಳು ವಾರ್ಷಿಕ ೨,೦೦೧ ಮೆ.ಟನ್. ಉತ್ಪಾದನೆ ಮಾತ್ರ ಮಾಡುತ್ತಿದ್ದವು. ಇವುಗಳಲ್ಲಿ ಬಹುತೇಕ ತೆಂಗಿನ ನಾರಿನ ಅಭಿವೃದ್ಧಿ ನಿಗಮ ಹಾಗೂ ತೆಂಗಿನ ನಾರಿನ ಮಹಾಮಂಡಳಿಗಳ ಉತ್ಪಾದನಾ ಘಟಕಗಳು.
  • ಇ. ಕರ್ಲ್ಲಡ್ ಕಾಯರ್ :
  • ರಾಜ್ಯದಲ್ಲಿ ಒಟ್ಟು ೫೬ ಕರ್ಲ್ಲ್‌ಡ್ ಕಾಯರ್ ತಯಾರಿಕಾ ಘಟಕಗಳಿದ್ದು, ಇವುಗಳ ವಾರ್ಷಿಕ ಉತ್ಪಾದನಾ ಸಾಮರ್ಥ್ಯ ೧೨,೧೩೦ ಮೆ.ಟನ್. ಈ ಘಟಕಗಳಿಂದ ವಾರ್ಷಿಕ ೬,೬೯೦ ಮೆ.ಟನ್. ಉತ್ಪಾದನೆಯಾಗುತ್ತಿದ್ದು, ಈ ಪೈಕಿ ಬಹುತೇಕ ಘಟಕಗಳು ತುಮಕೂರು ಜಿಲ್ಲೆಯಲ್ಲಿ ಸ್ಥಾಪಿತಗೊಂಡಿರುವುದು.
  • ಎಫ್. ರಬ್ಬರೀಕೃತ ನಾರಿನ ಉತ್ಪನ್ನಗಳು:
  • ರಾಷ್ಟ್ರೀಯ ಮಾನ್ಯತೆ ಪಡೆದ ಕರ್ಲಾನ್, ರೆಸ್ಟೋಲೆಕ್ಸ್, ಬೆಡ್ಸಿ ಮತ್ತು ಡ್ಯೂರೋಫ್ಲೆಕ್ಸ್ ಸ್ಥಳೀಯ ಮಾರುಕಟ್ಟೆಯಲ್ಲಿನ ಪ್ರಮುಖ ಸಂಸ್ಥೆಗಳು. ಪ್ರಸ್ತುತ, ರಾಜ್ಯದಲ್ಲಿ ಐದು ಹಾಸಿಗೆ ತಯಾರಿಕಾ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಇನ್ನೂ ಹೆಚ್ಚಿನ ಉತ್ಪಾದನಾ ಘಟಕಗಳು ಸ್ಥಾಪಿತಗೊಳ್ಳುವ ನಿರೀಕ್ಷೆ ಇದೆ.
  • ಜಿ. ಹೊಸ ಉತ್ಪನ್ನಗಳು:
   ಕಾಯರ್ ಕಾಂಪೋಸಿಟ್ ಉತ್ಪನ್ನಗಳು - ಪ್ರೈವುಡ್‌ಗೆ ಬದಲಿ ಉತ್ಪನ್ನ
   ನೇಯದಿರುವ ನಾರಿನ ಉತ್ಪನ್ನ ಹಾಗೂ ಉಡುಗೊರೆ ವಸ್ತುಗಳು
   ಕಾಯರ್ ಪಿತ್ ಘಟಕ – ತೋಟಗಾರಿಕೆ ಹಾಗೂ ಕೃಷಿ ಕ್ಷೇತ್ರದಲ್ಲಿ ಸಾವಯವ ಗೊಬ್ಬರವಾಗಿ ಬಳಕೆ

 

 • ಹೊಸ ಉತ್ಪಾದನಾ ಕೇಂದ್ರಗಳ ಸ್ಥಾಪನೆ :

 

  • ಸುಮಾರು ೮೧%ರಷ್ಟು ಬಳಕೆಯಾಗದಿರುವ ತೆಂಗು ಸಂಪನ್ಮೂಲದ ಸದ್ಬಳಕೆಗಾಗಿ ವಿಫುಲ ಅವಕಾಶವಿರುವುದರಿಂದ, ಹೆಚ್ಚಿನ ಸಂಖ್ಯೆಯಲ್ಲಿ ಹುರಿ, ಹಗ್ಗ, ಮ್ಯಾಟ್, ಮ್ಯಾಟಿಂಗ್, ಹಾಸಿಗೆ ತಯಾರಿಕಾ ಘಟಕಗಳನ್ನು ಸ್ಥಾಪಿಸಬಹುದಾಗಿದೆ.
  • ಅವಕಾಶಗಳ ಲಭ್ಯತೆ:
  • ರಾಜ್ಯದಲ್ಲಿ ಅಧಿಕ ಇಳುವರಿಗಾಗಿ ಹೆಚ್ಚು ತೆಂಗು ಬೆಳೆಯಲು ಅವಶ್ಯಕವಿರುವ ಹವಮಾನ ಹಾಗೂ ಕರಾವಳಿ ಪ್ರದೇಶವು ಹೇರಳವಾಗಿವೆ.
  • ರಾಜ್ಯ ಉತ್ತಮ ರಸ್ತೆ, ರೈಲು, ವಿಮಾನ ಸಂಪರ್ಕ ಹಾಗೂ ಸರ್ಕಾರಿ ಪೋತ್ಸಾಹದಿಂದ ನೆರವಿನಿಂದ ತೆಂಗಿನ ನಾರಿನ ಚಟುವಟಿಕೆ ಹಾಗೂ ತರಬೇತಿ ಸೌಲಭ್ಯಗಳ ಲಭ್ಯತೆ
  • ರಬ್ಬರೀಕೃತ ನಾರಿನ ಉತ್ಪನ್ನಗಳಿಗೆ ಹೆಚ್ಚಿನ ರೀತಿಯಲ್ಲಿ ಉತ್ತೇಜನವಿದ್ದು, ಪರೋಕ್ಷವಾಗಿ ಕರ್ಲ್ಡ ಕಾಯರ್ ಘಟಕಗಳಿಗೆ ಹೆಚ್ಚು ಲಾಭದಾಯಕವಾಗಿರುತ್ತದೆ. ಇದರಿಂದ ಹೆಚ್ಚಿನ ಉದ್ಯೋಗಾವಕಾಶಕ್ಕೆ ಅನುವು ಮಾಡಿಕೊಡಬಹುದಾಗಿರುವುದಲ್ಲದೆ, ಯಥೇಚ್ಛವಾಗಿ ಲಭ್ಯವಿರುವ ತೆಂಗು ಸಂಪನ್ಮೂಲ ಸದ್ಬಳಕೆಗೆ ಕ್ರಮ.

 

 • ತರಬೇತಿ :

 

 • ತೆಂಗಿನ ನಾರಿನ ಕೈಗಾರಿಕೆಯು ರಾಜ್ಯಕ್ಕೆ ಹೊಸದಾಗಿದ್ದು, ಅವಶ್ಯಕ ಕೌಶಲ್ಯಾಭಿವೃದ್ಧಿ ಹೊಂದಿದ ಕುಶಲಕರ್ಮಿಗಳು ಅಭಾವವನ್ನು ರಾಜ್ಯ ಎದುರಿಸುತ್ತಿದೆ. ಕಳೆದ ದಶಕದಿಂದಲ್ಲೆ ನಾರಿನ ಉತ್ಪನ್ನಗಳ ತಯಾರಿಕೆಯಲ್ಲಿ ತರಬೇತಿಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರಾರಂಭ ವರ್ಷಗಳಲ್ಲಿ ಅಂದರೆ ೧೯೮೫ ರಿಂದ ೧೯೯೧ರವರೆಗೆ ನಿಗಮ ಸುಮಾರು ೧೫೦೦ ಜನರಿಗೆ ತರಬೇತಿಯನ್ನು ನೀಡಿದೆ.

ಇತ್ತೀಚಿನ ನವೀಕರಣ​ : 18-12-2020 11:14 AM ಅನುಮೋದಕರು: Approver


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080